ಗೋಶಾಲೆ ಕುರಿತು
ಶ್ರೀ ಆದಿಶಂಕರಾಚಾರ್ಯ ಶಾರದ ಲಕ್ಷ್ಮೀನರಸಿಂಹ ಪೀಠದ ಹರಿಹರಪುರದ ಶ್ರೀಮಠ ಬೃಂದಾವನ ಗೋಶಾಲೆಯು ಹರಿಹರಪುರದ ಸ್ಥಳೀಯ ಗೋವುಗಳಿಗೆ ಮೀಸಲಾದ ಆಶ್ರಯ ತಾಣವಾಗಿದೆ. ಗೋಶಾಲೆಯು ಪ್ರಸ್ತುತ ಸುಮಾರು 200 ಸ್ಥಳೀಯ ಹಸುಗಳಿಗೆ ಆಶ್ರಯವನ್ನು ಒದಗಿಸುತ್ತದೆ.
ಬೃಂದಾವನ ಗೌಶಾಲಾ ಕುರಿತು
- ಗೋವುಗಳ ಸಂರಕ್ಷಣೆಯ ಮಹತ್ವವನ್ನು ಒತ್ತಿ ಹೇಳುವ ಶ್ರೀ ಆದಿ ಶಂಕರಾಚಾರ್ಯರ ಬೋಧನೆಗಳಿಗೆ ಅನುಗುಣವಾಗಿ ಬೃಂದಾವನ ಗೋಶಾಲೆಯು ಕಾರ್ಯನಿರ್ವಹಿಸುತ್ತದೆ.ಸ್ಥಳೀಯ ತಳಿಯ ಹಸುಗಳಿಗೆ ಇಲ್ಲಿ ಆದ್ಯತೆ ನೀಡಲಾಗುತ್ತದೆ. ಈ ಗೋವುಗಳಿಗೆ ಸುರಕ್ಷಿತ ಮತ್ತು ಪೋಷಿತ ವಾತಾವರಣವನ್ನು ಒದಗಿಸುವ ಮೂಲಕ ಸ್ಥಳೀಯ ತಳಿಗಳ ಪರಂಪರೆಯನ್ನು ರಕ್ಷಿಸುವ ಮತ್ತು ಅವುಗಳ ಸಂರಕ್ಷಣೆಯನ್ನು ಉತ್ತೇಜಿಸುವ ಗುರಿಯನ್ನು ಗೋಶಾಲೆಯು ಹೊಂದಿದೆ.
- ಬೃಂದಾವನ ಗೋಶಾಲೆಯಲ್ಲಿ ಹಸುಗಳ ಯೋಗಕ್ಷೇಮವನ್ನು ಗಮನದಲ್ಲಿ ಇಟ್ಟುಕೊಂಡು, ಅತ್ಯಂತ ಸಹಾನುಭೂತಿಯಿಂದ ಹಸುಗಳ ಆರೈಕೆಯನ್ನು ಮಾಡಲಾಗುತ್ತದೆ. ತರಬೇತಿ ಪಡೆದ ಸಿಬ್ಬಂದಿ ಮತ್ತು ಸ್ವಯಂಸೇವಕರು ಹಸುಗಳಿಗೆ ಸೂಕ್ತವಾದ ಪೋಷಣೆ, ವೈದ್ಯಕೀಯ ಆರೈಕೆ ಮತ್ತು ಆಶ್ರಯವನ್ನು
- ಗೋಶಾಲೆಯು ಗೋವುಗಳಿಗೆ ಆಶ್ರಯ ನೀಡುವುದರ ಜೊತೆಗೆ ಗೋಸಂರಕ್ಷಣೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಸ್ಥಳೀಯ ತಳಿಗಳ ಮಹತ್ವವನ್ನು ಮತ್ತು ಸುಸ್ಥಿರ ಕೃಷಿ, ಗ್ರಾಮೀಣ ಆರ್ಥಿಕತೆಗೆ ಸ್ಥಳೀಯ ತಳಿಯ ಹಸುಗಳ ಮಹತ್ವವನ್ನು ತಿಳಿಸುವ ಶೈಕ್ಷಣಿಕ ಕಾರ್ಯಕ್ರಮಗಳು ಮತ್ತು ಜಾಗೃತಿ ಅಭಿಯಾನಗಳನ್ನು ನಡೆಸುತ್ತದೆ
- ಬೃಂದಾವನ ಗೋಶಾಲೆಯ ಚಟುವಟಿಕೆಗಳು ಶ್ರೀ ಆದಿ ಶಂಕರಾಚಾರ್ಯರ ಬೋಧನೆಗಳನ್ನು ಪ್ರತಿಬಿಂಬಿಸುವ ಅಹಿಂಸೆ ಮತ್ತು ಸುಸ್ಥಿರ ಜೀವನ ತತ್ವಗಳೊಂದಿಗೆ ಜೋಡಿಸಲ್ಪಟ್ಟಿವೆ. ಗೋಶಾಲೆಯು ಗೋವುಗಳಿಗೆ ಆಶ್ರಯತಾಣವಾಗಿರುವುದು ಮಾತ್ರವಲ್ಲದೆ, ಹಲವರಿಗೆ ಜವಾಬ್ದಾರಿಯುತ ಜೀವನ ವಿಧಾನವನ್ನು ಅಳವಡಿಸಿಕೊಳ್ಳಲು ಸ್ಫೂರ್ತಿಯ ಮೂಲವಾಗಿದೆ.
ದೃಷ್ಟಿಕೋನ
ಪವಿತ್ರ ಗೋವಿನ ರಕ್ಷಣೆ ಮತ್ತು ಪೋಷಣೆಯ ಮೂಲಕ ಶಾಂತಿ ಮತ್ತು ಸಮೃದ್ಧಿಯ ಸಾಮರಸ್ಯದ ಜಗತ್ತನ್ನು ಸೃಷ್ಟಿಸುವುದು ಬೃಂದಾವನ ಗೋ ಶಾಲೆಯ ದೃಷ್ಟಿಕೋನ.
ಧ್ಯೇಯೋದ್ದೇಶ
ಬೃಂದಾವನ ಗೋಶಾಲೆಯಲ್ಲಿ, ನಾವು ಪ್ರಾಚೀನ ವೈದಿಕ ಸಂಪ್ರದಾಯದಂತೆ ಗೋವುಗಳನ್ನು ನೋಡಿಕೊಳ್ಳುತ್ತೇವೆ. ಅವುಗಳನ್ನು ಭೂಮಾತೆಯ ದೈವಿಕ ಅವತಾರವೆಂದು ನೋಡಲಾಗುತ್ತದೆ. ಸುಸ್ಥಿರ ಅಭ್ಯಾಸಗಳು ಮತ್ತು ಶಿಕ್ಷಣದ ಮೂಲಕ, ಗೋವುಗಳು ಸ್ವಾಭಾವಿಕವಾಗಿ ಬೆಳೆಯುವ ಸಂರಕ್ಷಿತ ಆಶ್ರಯತಾಣವನ್ನು ನಿರ್ಮಿಸುವುದು ನಮ್ಮ ಗುರಿಯಾಗಿದೆ. ಗೋವುಗಳ ಕಲ್ಯಾಣವನ್ನು ಉತ್ತೇಜಿಸುವುದು, ಸಮುದಾಯದಲ್ಲಿ ಗೋವುಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಪರಿಸರ ಸಮತೋಲದ ದೃಷ್ಟಿಯಿಂದ ಗೋವುಗಳ ಪ್ರಾಮುಖ್ಯತೆಯನ್ನು ಜಾಹೀರುಗೊಳಿಸುವುದು ನಮ್ಮ ಉದ್ದೇಶವಾಗಿದೆ. ಶ್ರೀ ಆದಿ ಶಂಕರಾಚಾರ್ಯ ಶಾರದ ಲಕ್ಷ್ಮೀನರಸಿಂಹ ಪೀಠಂ ಶ್ರೀಮಠ ಹರಿಹರಪುರ ಅವರ ಬೋಧನೆಯಲ್ಲಿ ಬೇರೂರಿರುವ ನಾವು ಸಕಲ ಜೀವಿಗಳಿಗೆ ಸಾಮರಸ್ಯದ ಭವಿಷ್ಯಕ್ಕಾಗಿ ಶ್ರಮಿಸುತ್ತೇವೆ.
ಹೊಸ ಗೌಶಾಲಾ ಬಗ್ಗೆ
ನಾವು ನಿರ್ಮಾಣ ಪ್ರಕ್ರಿಯೆಯಲ್ಲಿ ಮುಂದುವರಿಯುತ್ತಿರುವಾಗ, ಈ ದೃಷ್ಟಿಯನ್ನು ರಿಯಾಲಿಟಿ ಮಾಡುವಲ್ಲಿ ಬೆಂಬಲಕ್ಕಾಗಿ ನಾವು ನಮ್ಮ ಸಮುದಾಯವನ್ನು ತಲುಪುತ್ತಿದ್ದೇವೆ. ನಮ್ಮ ಗೌಶಾಲಾ ನಿರ್ಮಾಣದ ಅಂದಾಜು ವೆಚ್ಚ 5.00 ಕೋಟಿ ರೂಪಾಯಿಗಳು ಮತ್ತು ನಿರ್ಮಾಣ ಪ್ರಕ್ರಿಯೆಯ ವಿವಿಧ ಅಂಶಗಳಿಗೆ ಕೊಡುಗೆ ನೀಡಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ.
ಬೃಂದಾವನ ಗೋಶಾಲಾ - ನಿರ್ಮಾಣ ಹಂತದಲ್ಲಿರುವ ಹೊಸ ಗೋಶಾಲೆ
ನಮ್ಮ ಹೊಸ ಗೋಶಾಲೆಯು ನಿರ್ಮಾಣ ಹಂತದಲ್ಲಿದ್ದು, ಪವಿತ್ರ ಸೌಮ್ಯ ಜೀವಿಗಳಿಗೆ ಉನ್ನತ ಮಟ್ಟದ ಆಶ್ರಯ ನೀಡುವ ಪ್ರಮಾಣ ಮಾಡುತ್ತದೆ. ಪ್ರೀತಿ ಮತ್ತು ಕಾಳಜಿಯೊಂದಿಗೆ ಪ್ರತಿ ಇಟ್ಟಿಗೆಯನ್ನು ಇಟ್ಟು ಗೋವುಗಳಿಗೆ ನೂತನ ಆಶ್ರಯವನ್ನು ನಾವು ನಿರ್ಮಿಸುತ್ತಿದ್ದೇವೆ. ನಮ್ಮ ಜಾನುವಾರು ಸ್ನೇಹಿತರಿಗೆ ಉಜ್ವಲ ಭವಿಷ್ಯವನ್ನು ನಿರ್ಮಿಸಲು ಈ ಪ್ರಯಾಣದಲ್ಲಿ ನೀವೂ ನಮ್ಮೊಂದಿಗೆ ಸೇರಿಕೊಳ್ಳಿ. ಎಲ್ಲರೂ ಸೇರಿ ಈ ಪವಿತ್ರ ಜೀವಿಗಳನ್ನು ಪೋಷಿಸೋಣ ಮತ್ತು ರಕ್ಷಿಸೋಣ.
800+
ಹಸುಗಳು
ಹೊಸ ಗೋಶಾಲೆಯು 800 ಕ್ಕೂ ಹೆಚ್ಚು ಹಸುಗಳಿಗೆ ಆಶ್ರಯ ಕಲ್ಪಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ನಮ್ಮ ಪ್ರೀತಿಯ ಗೋವುಗಳಿಗೆ ಸಾಕಷ್ಟು ಸ್ಥಳಾವಕಾಶವನ್ನು ಖಾತ್ರಿಪಡಿಸುತ್ತದೆ. ವೈವಿಧ್ಯಮಯವಾದ ಸೌಲಭ್ಯಗಳು ಮತ್ತು ಚಿಂತನಶೀಲ ವಿನ್ಯಾಸದೊಂದಿಗೆ ನಮ್ಮ ಆರೈಕೆಗೆ ಒಪ್ಪಿಸಲಾದ ಪ್ರತಿ ಹಸುವಿಗೆ ಉತ್ತಮ ಅಶ್ರಯ ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ. ವಿಶಾಲವಾದ ಆಶ್ರಯ ಪ್ರದೇಶದಿಂದ ಹಿಡಿದು ಸೊಂಪಾದ ಹುಲ್ಲುಗಾವಲುಗಳವರೆಗೆ ಯಾವ ವಿಷಯದಲ್ಲೂ ನಾವು ರಾಜಿ ಮಾಡಿಕೊಂಡಿಲ್ಲ. ಸೌಮ್ಯ ಜಾನುವಾರಗಳ ಅಗತ್ಯಗಳನ್ನು ಪೂರೈಸಲು, ಅವರ ಯೋಗಕ್ಷೇಮ ಮತ್ತು ಸಂತೋಷವನ್ನು ಉತ್ತೇಜಿಸಲು ಅನುವಾಗುವಂತೆ ಈ ಗೋಶಾಲನ್ನ ವಿನ್ಯಾಸೊಳಿಸಲಾಗುತ್ತದೆ. ನಮ್ಮ ಸಾಂಪ್ರದಾಯಕ ಜಾನುವಾರಗಳಿಗೆ ಅತ್ಯುತ್ತಮ ಪೋಷಣೆಯ ವಾತಾವರಣ ಕಲ್ಪಿಸಲು ನಮ್ಮೊಂದಿಗೆ ಸೇರಿಕೊಳ್ಳಿ.
1.5 ಎಕರೆ ಪ್ರದೇಶ
1.5 ಎಕರೆಗಿಂತಲೂ ವಿಶಾಲವಾದ ಪ್ರದೇಶದಲ್ಲಿ ಹರಡಿರುವ ಹೊಸ ಗೋ ಶಾಲೆ ನಮ್ಮ ಗೋವಿಗೆ ವಿಶಾಲವಾದ ಸಂರಕ್ಷಿತ ಆಶ್ರಯತಾಣವನ್ನು ಒದಗಿಸುತ್ತದೆ. ಗೋವುಗಳು ಮುಕ್ತವಾಗಿ ತಿರುಗಾಡಲು ಮತ್ತು ಮೇಯಲು ಸಾಕಷ್ಟು ಸ್ಥಳಾವಕಾಶವಿದ್ದು ನಮ್ಮ ಪ್ರೀತಿಯ ಜಾನುವಾರುಗಳು ತಮಗಿಷ್ಟವಾದ ಸ್ವಾತಂತ್ರ್ಯ ಮತ್ತು ಶಾಂತಿಯನ್ನು ಆನಂದಿಸಬಹುದು. ಹಚ್ಚ ಹಸಿರಿನ ಹುಲ್ಲುಗಾವಲುಗಳಿಂದ ಹಿಡಿದು ನೆರಳಿನ ವಿಶ್ರಾಂತಿ ಪ್ರದೇಶಗಳವರೆಗೆ ನಮ್ಮ ವಿಶಾಲವಾದ ಗೋಶಾಲೆಯ ಪ್ರತಿಯೊಂದು ಮೂಲೆಯನ್ನೂ ಪ್ರೀತಿಯ ಹಸುಗಳಿಗೆ ಸೌಕರ್ಯ ಒದಗಿಸಲು ಅನುವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಈ ಸೌಮ್ಯ ಪ್ರಾಣಿಗಳಿಗಾಗಿ ಸಹಾನುಭೂತಿ ಮತ್ತು ಬದ್ಧತೆಯ ಪೋಷಣೆಯನ್ನು ಒದಗಿಸವ ನಮ್ಮ ಕಾರ್ಯದಲ್ಲಿ ನೀವೂ ಸೇರಿಕೊಳ್ಳಿ.
ಪವಿತ್ರ ಗೋವುಗಳನ್ನು ಸಂರಕ್ಷಿಸಲು ನಮ್ಮೊಂದಿಗೆ ಜೊತೆಯಾಗಿ
ಬೃಂದಾವನ ಗೋಶಾಲೆಯಲ್ಲಿ ಪವಿತ್ರ ಗೋವುಗಳ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ನಮ್ಮೊಂದಿಗೆ ಸೇರಿ. ನಿಮ್ಮ ಕೊಡುಗೆ ನಮ್ಮ ಸಹಾನುಭೂತಿಯ ಸಂಪ್ರದಾಯವನ್ನು ಕಾಪಾಡುತ್ತದೆ.
ಸಂಪರ್ಕ
- +91 89516 74836
- info@brindavangoshala.in
- ಹರಿಹರಪುರ, ಚಿಕ್ಕಮಗಳೂರು ಜಿಲ್ಲೆ, ಕರ್ನಾಟಕ, ಭಾರತ – 577120
Copyright © 2024 Brindavangoshala | Powered by Yalkod.in