Skip to content

Brindavangoshala

ಬೃಂದಾವನ ಗೋಶಾಲೆಗೆ ಸ್ವಾಗತ

ಶ್ರೀ ಆದಿ ಶಂಕರಾಚಾರ್ಯ ಶಾರದಾ ಲಕ್ಷ್ಮೀ ನರಸಿಂಹ ಪೀಠ, ಹರಿಹರಪುರ ಇವರ ಹೆಮ್ಮೆಯ ಯೋಜನೆ

ಗೋ ಸಂರಕ್ಷಣೆಯ ಪವಿತ್ರ ಕಾರ್ಯದಲ್ಲಿ ತೊಡಗಿರುವ ಬೃಂದಾವನ ಗೋ ಶಾಲೆಗೆ ತಮಗೆಲ್ಲ ಸ್ವಾಗತ. ಕರುಣೆ, ಸಹಾನುಭೂತಿ, ಸಂಪ್ರದಾಯ ಮತ್ತು ಸಂಸ್ಕೃತಿಯು ಅನಾವರಣಗೊಳ್ಳುವ ಪ್ರದೇಶವಿದು.

ಪ್ರಶಾಂತತೆಯ ಅನುಭವ

ಗೋವುಗಳು ಪ್ರಶಾಂತವಾಗಿ, ಮುಕ್ತವಾಗಿ ವಿಹರಿಸುವ ಸಂರಕ್ಷಿತ ಪ್ರದೇಶ

ಸಾಂಪ್ರದಾಯಿಕ ವಿಧಾನ

ನಾವು ಗೋರಕ್ಷಣೆ ಮತ್ತು ಸಂರಕ್ಷಣೆಯ ಪುರಾತನ ಪದ್ಧತಿಗೆ ಒತ್ತು ನೀಡುತ್ತೇವೆ

ಕರುಣೆಯ ಅನಾವರಣ

ಸಮರ್ಪಿತ ಕಾಳಜಿಯ ಮೂಲಕ ಪ್ರತಿ ಹಸುವಿನ ಯೋಗಕ್ಷೇಮಕ್ಕೆ ಆದ್ಯತೆ

ನಮ್ಮ ಬಳಗವನ್ನು ಸೇರಿ

ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಾಮರಸ್ಯದ ಅನುಭವ ಪಡೆಯಲು ನಮ್ಮ ಬಳಗ ಸೇರಿ

ಗೋಶಾಲೆ ಕುರಿತು

ಶ್ರೀ ಆದಿಶಂಕರಾಚಾರ್ಯ ಶಾರದ ಲಕ್ಷ್ಮೀನರಸಿಂಹ ಪೀಠದ ಹರಿಹರಪುರದ ಶ್ರೀಮಠ ಬೃಂದಾವನ ಗೋಶಾಲೆಯು ಹರಿಹರಪುರದ ಸ್ಥಳೀಯ ಗೋವುಗಳಿಗೆ ಮೀಸಲಾದ ಆಶ್ರಯ ತಾಣವಾಗಿದೆ. ಗೋಶಾಲೆಯು ಪ್ರಸ್ತುತ ಸುಮಾರು 200 ಸ್ಥಳೀಯ ಹಸುಗಳಿಗೆ ಆಶ್ರಯವನ್ನು ಒದಗಿಸುತ್ತದೆ. ಗೋವುಗಳ ಸಂರಕ್ಷಣೆಯ ಮಹತ್ವವನ್ನು ಒತ್ತಿ ಹೇಳುವ ಶ್ರೀ ಆದಿ ಶಂಕರಾಚಾರ್ಯರ ಬೋಧನೆಗಳಿಗೆ ಅನುಗುಣವಾಗಿ ಬೃಂದಾವನ ಗೋಶಾಲೆಯು ಪವಿತ್ರ ಪ್ರಾಣಿಗಳಿಗೆ ಸ್ವರ್ಗವಾಗಿ ಕಾರ್ಯನಿರ್ವಹಿಸುತ್ತದೆ. ವಿಶಿಷ್ಟವಾದ ಆನುವಂಶಿಕ ಲಕ್ಷಣಗಳು ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿರುವ ಸ್ಥಳೀಯ ತಳಿಯ ಹಸುಗಳಿಗೆ ಇಲ್ಲಿ ಆದ್ಯತೆ ನೀಡಲಾಗುತ್ತದೆ. ಈ ಗೋವುಗಳಿಗೆ ಸುರಕ್ಷಿತ ಮತ್ತು ಪೋಷಿತ ವಾತಾವರಣವನ್ನು ಒದಗಿಸುವ ಮೂಲಕ ಸ್ಥಳೀಯ ತಳಿಗಳ ಪರಂಪರೆಯನ್ನು ರಕ್ಷಿಸುವ ಮತ್ತು ಅವುಗಳ ಸಂರಕ್ಷಣೆಯನ್ನು ಉತ್ತೇಜಿಸುವ ಗುರಿಯನ್ನು ಗೋಶಾಲೆಯು ಹೊಂದಿದೆ

ನಮ್ಮ ಉದ್ದೇಶವನ್ನು ಬೆಂಬಲಿಸಿ

ಗೋವುಗಳನ್ನು ಸಂರಕ್ಷಿಸಿ, ಸಂಪ್ರದಾಯ ಉಳಿಸಿ ಇಂದೇ ಪವಿತ್ರ ಕಾರ್ಯದಲ್ಲಿ ಕೈಜೋಡಿಸಿ

ನಿಮ್ಮ ಉದಾತ್ತ ಸೇವೆಯು ಪವಿತ್ರ ಗೋವುಗಳ ಜೀವನದಲ್ಲಿ ನಿಜವಾದ ಬದಲಾವಣೆಯನ್ನು ತರಬಹುದು. ಇಂದೇ ಸಹಾಯಹಸ್ತ ಚಾಚುವ ಮೂಲಕ ಗೋ ಸಂರಕ್ಷಣೆಯ ಪವಿತ್ರ ಕಾರ್ಯವು ಅಡೆತಡೆರಹಿತವಾಗಿ ಮುಂದುವರೆಸಲು ನಮಗೆ ಸಹಾಯ ಮಾಡಿ.

ಗೋವುಗಳ ದತ್ತು

ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು ಗೋಶಾಲೆಯಲ್ಲಿರುವ ಹಸುವನ್ನು ದತ್ತು ಪಡೆಯಲು ಅವಕಾಶವಿದೆ. ಹಸುವಿನ ಆಹಾರ, ವೈದ್ಯಕೀಯ ವೆಚ್ಚಗಳು ಮತ್ತು ಹಸುವಿನ ವಸತಿ ಸೇರಿದಂತೆ ಹಸುವಿನ ಆರೈಕೆಯ ವೆಚ್ಚಗಳಿಗೆ ದತ್ತು ಪಡೆದವರು ಹಣಕಾಸಿನ ನೆರವು ನೀಡುತ್ತಾರೆ. ಪ್ರಾಯೋಜಿತ ಹಸುವಿನ ಯೋಗಕ್ಷೇಮದ ಬಗ್ಗೆ ದತ್ತು ಪಡೆದವರಿಗೆ ನಿರಂತರ ಮಾಹಿತಿ ನೀಡಲಾಗುತ್ತದೆ. ಹಸುವನ್ನು ನೋಡಲು ಹಾಗೂ ಅದರ ಜೊತೆ ಸಮಯ ಕಳೆಯಲು ದತ್ತು ಪಡೆದವರು ಗೋಶಾಲೆಗೆ ಭೇಟಿ ನೀಡಬಹುದು.

ಹಸು ಆಹಾರ

ದಾನಿಗಳು ಹಸುಗಳಿಗೆ ಪೌಷ್ಟಿಕ ಆಹಾರವನ್ನು ಒದಗಿಸಲು ದೇಣಿಗೆ ನೀಡಬಹುದು. ದೇಣಿಗೆಗಳು ಹಣಕಾಸಿನ ನೆರವು, ಸಾವಯವ ಆಹಾರ ಅಥವಾ ಮೇವಿನ ರೂಪದಲ್ಲಿರಬಹುದು. ಈ ಸೇವಾ ಕಾರ್ಯಕ್ರಮವು ಹಸುಗಳಿಗೆ ಸಮತೋಲಿತ ಆಹಾರ ದೊರಕುವುದನ್ನು ಖಚಿತಪಡಿಸುವುದರ ಜೊತೆಗೆ ಹಸುಗಳ ಆರೋಗ್ಯ ಮತ್ತು ಯೋಗಕ್ಷೇಮ ಕಾಪಾಡುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.

ವೈದ್ಯಕೀಯ ಆರೈಕೆ

ಗೋವುಗಳ ವೈದ್ಯಕೀಯ ಚಿಕಿತ್ಸೆ ಮತ್ತು ಆರೈಕೆಗೆ ಮೀಸಲಾದ ದೇಣಿಗೆಯನ್ನು ಗೋಶಾಲೆಯು ವಿಶೇಷವಾಗಿ ಸ್ವಾಗತಿಸುತ್ತದೆ. ಈ ದೇಣಿಗೆಯು ಪಶುವೈದ್ಯಕೀಯ ಸೇವೆಗಳು, ಲಸಿಕೆಗಳು, ಔಷಧಿಗಳು ಮತ್ತು ಸಾಮಾನ್ಯ ವೈದ್ಯಕೀಯ ಅಗತ್ಯಗಳಿಗೆ ಸಂಬಂಧಿಸಿದ ವೆಚ್ಚಗಳನ್ನು ಸರಿದೂಗಿಸಲು ಸಹಾಯ ಮಾಡುತ್ತದೆ. ಈ ದೇಣಿಗೆಯು ಹಸುಗಳ ಆರೋಗ್ಯದ ಕಡೆಗೆ ತ್ವರಿತ ಹಾಗೂ ಸೂಕ್ತ ಗಮನ ನೀಡುವುದನ್ನು ಖಚಿತಪಡಿಸುತ್ತದೆ.

ಮೂಲಸೌಕರ್ಯ ಅಭಿವೃದ್ಧಿ

ಮೂಲಸೌಕರ್ಯ ಅಭಿವೃದ್ಧಿಗೆ ನೀಡಿದ ದೇಣಿಗೆಯು ಹಸುಗಳ ಆಶ್ರಯದ ಅವಶ್ಯಕ ಸೌಕರ್ಯಗಳು ಮತ್ತು ಹಸುಗಳ ಜೀವನ ಸ್ಥಿತಿಯನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ. ಈ ದೇಣಿಗೆಗಳನ್ನು ಹಸುವಿನ ಆಶ್ರಯಗಳನ್ನು ನಿರ್ಮಿಸಲು ಅಥವಾ ನವೀಕರಿಸಲು, ನೀರು ಸರಬರಾಜು ವ್ಯವಸ್ಥೆಯನ್ನು ಸುಧಾರಿಸಲು, ಮೇವು ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಮತ್ತು ಉತ್ತಮ ನೈರ್ಮಲ್ಯಕ್ಕೆ ಸಂಬಂಧಿಸಿದ ಸೌಲಭ್ಯಗಳನ್ನು ಒದಗಿಸಲು ಬಳಸಿಕೊಳ್ಳಲಾಗುತ್ತದೆ.

ಶಿಕ್ಷಣ ಮತ್ತು ಜಾಗೃತಿ

ಗೋಶಾಲಾ ನಡೆಸುವ ಶೈಕ್ಷಣಿಕ ಕಾರ್ಯಕ್ರಮಗಳು ಮತ್ತು ಜಾಗೃತಿ ಅಭಿಯಾನಗಳಿಗೆ ವ್ಯಕ್ತಿಗಳು ಮತ್ತು ಸಂಸ್ಥೆಗಳು ಕೊಡುಗೆ ನೀಡಬಹುದು. ಹಸುಗಳ ಕಲ್ಯಾಣ, ಸ್ಥಳೀಯ ತಳಿಗಳು ಮತ್ತು ಸುಸ್ಥಿರ ಜೀವನ ಪದ್ಧತಿಗಳನ್ನು ಉತ್ತೇಜಿಸುವ ಕಾರ್ಯಾಗಾರ-ಉಪನ್ಯಾಸಗಳನ್ನು ಹಮ್ಮಿಕೊಳ್ಳಲು ಈ ದೇಣಿಗೆಯನ್ನು ಬಳಸಿಕೊಳ್ಳಲಾಗುತ್ತದೆ.

ಸಾಮಾನ್ಯ ದೇಣಿಗೆಗಳು

ಗೋಶಾಲಾ ಸಾಮಾನ್ಯ ದೇಣಿಗೆಗಳನ್ನು ಸ್ವೀಕರಿಸುತ್ತದೆ. ಇದನ್ನು ಸಿಬ್ಬಂದಿ ವೇತನ, ನಿರ್ವಹಣೆ, ಸಾರಿಗೆ ಮತ್ತು ಹಸುಗಳ ದೈನಂದಿನ ಆರೈಕೆ ಸೇರಿದಂತೆ ವಿವಿಧ ನಿರ್ವಹಣಾ ವೆಚ್ಚಗಳಿಗೆ ಬಳಸಲಾಗುತ್ತದೆ. ಸಾಮಾನ್ಯ ದೇಣಿಗೆಗಳು ಯಾವುದೇ ಹಣಕಾಸಿನ ಅಡೆತಡೆ ಇಲ್ಲದೆ ದೈನಂದಿನ ಕೆಲಸಗಳಿಗೆ ಅಗತ್ಯವಿರುವ ಹಣವನ್ನು ನಿಯೋಜಿಸಲು ಅನುವು ಮಾಡಿಕೊಡುತ್ತದೆ.

ಸೇವಾ ಅವಕಾಶಗಳು

ಶ್ರೀ ಆದಿ ಶಂಕರಾಚಾರ್ಯ ಶಾರದ ಲಕ್ಷ್ಮೀನರಸಿಂಹ ಪೀಠದ ಶ್ರೀಮಠದ ಹರಿಹರಪುರದ ಬೃಂದಾವನ ಗೋಶಾಲೆಯು ಗೋಭಕ್ತರಿಗೆ ಮತ್ತು ಗೋಪ್ರೇಮಿಗಳಿಗೆ ಹಲವಾರು ಸೇವಾವಕಾಶಗಳನ್ನು ಒದಗಿಸುತ್ತದೆ. ಗೋವುಗಳ ಕಲ್ಯಾಣ, ಸುರಕ್ಷತೆ, ಹಿಂದೂ ಮೌಲ್ಯಗಳು ಮತ್ತು ಸಂಪ್ರದಾಯಗಳನ್ನು ಸಂಭ್ರಮಿಸುವ ಅತ್ಯುತ್ತಮ ಅವಕಾಶ ಇಲ್ಲಿದೆ.

ಗೋ ಪೂಜೆ

ಗೋಶಾಲೆಯು ಭಕ್ತರಿಗೆ ಗೋ ಪೂಜೆಯಲ್ಲಿ ಭಾಗವಹಿಸಲು ಅವಕಾಶವನ್ನು ಒದಗಿಸುತ್ತದೆ. ಇದು ಗೋವುಗಳನ್ನು ಪೂಜಿಸುವ ಪವಿತ್ರ ಆಚರಣೆಯಾಗಿದೆ.

ಗೋ ದಾನ

ಗೋ-ದಾನವು ಹಸುಗಳನ್ನು ದಾನ ಮಾಡುವ ಅಥವಾ ದಾನದ ಒಂದು ರೂಪವಾಗಿ ಅರ್ಪಣೆ ಮಾಡುವ ಪವಿತ್ರ ಕಾರ್ಯ.

ಸ್ವಯಂಸೇವಕರಾಗಿರಿ

ಗೋಶಾಲೆಯು ಹಸುಗಳ ಆರೈಕೆಗಾಗಿ ತಮ್ಮ ಸಮಯ ಮತ್ತು ಶ್ರಮವನ್ನು ವಿನಿಯೋಗಿಸಲು ಬಯಸುವ ಸ್ವಯಂಸೇವಕರನ್ನು ಸ್ವಾಗತಿಸುತ್ತದೆ.

ಗೋಶಾಲೆ ನಿರ್ಮಾಣಕ್ಕೆ ಕೊಡುಗೆ ನೀಡಿ

ಗೋಶಾಲೆ ಸೌಲಭ್ಯಗಳ ನಿರ್ಮಾಣ ಮತ್ತು ವಿಸ್ತರಣೆಗೆ ಗೋಭಕ್ತರು ಮತ್ತು ಪ್ರೇಮಿಗಳು ಕೊಡುಗೆ ನೀಡಲು ಅವಕಾಶವಿದೆ.

ದೇಣಿಗೆ

ಗೋಶಾಲೆಗೆ ನೀಡುವ ದೇಣಿಗೆಗಳು ಹಸುಗಳ ಯೋಗಕ್ಷೇಮಕ್ಕಾಗಿ ಆಹಾರ, ಪಶುವೈದ್ಯಕೀಯ ಆರೈಕೆ ಮತ್ತು ವೈದ್ಯಕೀಯ ಸರಬರಾಜುಗಳಂತಹ ಪ್ರಮುಖ ಅಗತ್ಯಗಳನ್ನು ಒದಗಿಸಲು ನೆರವಾಗುತ್ತದೆ. ಪ್ರತಿಯೊಂದು ದಾನವೂ ಗೋವುಗಳ ಆರೋಗ್ಯ ಮತ್ತು ಸಂತೋಷವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಗೋಶಾಲೆಯಲ್ಲಿ ನಿಮ್ಮ ವಿಶೇಷ ದಿನವನ್ನು ಆಚರಿಸಿ

ಗೋಶಾಲೆಯು ತಮಗೆಲ್ಲರಿಗೂ ಜನ್ಮದಿನಗಳು, ವಾರ್ಷಿಕೋತ್ಸವಗಳು ಅಥವಾ ಹಬ್ಬಗಳಂತಹ ವಿಶೇಷ ಸಂದರ್ಭಗಳನ್ನು ಹಸುಗಳ ಜೊತೆ ಆಚರಿಸಲು ಒಂದು ಅನನ್ಯ ಅವಕಾಶವನ್ನು ನೀಡುತ್ತದೆ.

ಬೃಂದಾವನ ಗೋಶಾಲಾ - ನಿರ್ಮಾಣ ಹಂತದಲ್ಲಿರುವ ಹೊಸ ಗೋಶಾಲೆ

ನಮ್ಮ ಹೊಸ ಗೋಶಾಲೆಯು ನಿರ್ಮಾಣ ಹಂತದಲ್ಲಿದ್ದು, ಪವಿತ್ರ ಸೌಮ್ಯ ಜೀವಿಗಳಿಗೆ ಉನ್ನತ ಮಟ್ಟದ ಆಶ್ರಯ ನೀಡುವ ಪ್ರಮಾಣ ಮಾಡುತ್ತದೆ. ಪ್ರೀತಿ ಮತ್ತು ಕಾಳಜಿಯೊಂದಿಗೆ ಪ್ರತಿ ಇಟ್ಟಿಗೆಯನ್ನು ಇಟ್ಟು ಗೋವುಗಳಿಗೆ ನೂತನ ಆಶ್ರಯವನ್ನು ನಾವು ನಿರ್ಮಿಸುತ್ತಿದ್ದೇವೆ. ನಮ್ಮ ಜಾನುವಾರು ಸ್ನೇಹಿತರಿಗೆ ಉಜ್ವಲ ಭವಿಷ್ಯವನ್ನು ನಿರ್ಮಿಸಲು ಈ ಪ್ರಯಾಣದಲ್ಲಿ ನೀವೂ ನಮ್ಮೊಂದಿಗೆ ಸೇರಿಕೊಳ್ಳಿ. ಎಲ್ಲರೂ ಸೇರಿ ಈ ಪವಿತ್ರ ಜೀವಿಗಳನ್ನು ಪೋಷಿಸೋಣ ಮತ್ತು ರಕ್ಷಿಸೋಣ.

800+

ಹಸುಗಳು

ಹೊಸ ಗೋಶಾಲೆಯು 800 ಕ್ಕೂ ಹೆಚ್ಚು ಹಸುಗಳಿಗೆ ಆಶ್ರಯ ಕಲ್ಪಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ನಮ್ಮ ಪ್ರೀತಿಯ ಗೋವುಗಳಿಗೆ ಸಾಕಷ್ಟು ಸ್ಥಳಾವಕಾಶವನ್ನು ಖಾತ್ರಿಪಡಿಸುತ್ತದೆ. ವೈವಿಧ್ಯಮಯವಾದ ಸೌಲಭ್ಯಗಳು ಮತ್ತು ಚಿಂತನಶೀಲ ವಿನ್ಯಾಸದೊಂದಿಗೆ ನಮ್ಮ ಆರೈಕೆಗೆ ಒಪ್ಪಿಸಲಾದ ಪ್ರತಿ ಹಸುವಿಗೆ ಉತ್ತಮ ಅಶ್ರಯ ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ. ವಿಶಾಲವಾದ ಆಶ್ರಯ ಪ್ರದೇಶದಿಂದ ಹಿಡಿದು ಸೊಂಪಾದ ಹುಲ್ಲುಗಾವಲುಗಳವರೆಗೆ ಯಾವ ವಿಷಯದಲ್ಲೂ ನಾವು ರಾಜಿ ಮಾಡಿಕೊಂಡಿಲ್ಲ. ಸೌಮ್ಯ ಜಾನುವಾರಗಳ ಅಗತ್ಯಗಳನ್ನು ಪೂರೈಸಲು, ಅವರ ಯೋಗಕ್ಷೇಮ ಮತ್ತು ಸಂತೋಷವನ್ನು ಉತ್ತೇಜಿಸಲು ಅನುವಾಗುವಂತೆ ಈ ಗೋಶಾಲನ್ನ ವಿನ್ಯಾಸೊಳಿಸಲಾಗುತ್ತದೆ. ನಮ್ಮ ಸಾಂಪ್ರದಾಯಕ ಜಾನುವಾರಗಳಿಗೆ ಅತ್ಯುತ್ತಮ ಪೋಷಣೆಯ ವಾತಾವರಣ ಕಲ್ಪಿಸಲು ನಮ್ಮೊಂದಿಗೆ ಸೇರಿಕೊಳ್ಳಿ.

1.5 ಎಕರೆ ಪ್ರದೇಶ

1.5 ಎಕರೆಗಿಂತಲೂ ವಿಶಾಲವಾದ ಪ್ರದೇಶದಲ್ಲಿ ಹರಡಿರುವ ಹೊಸ ಗೋ ಶಾಲೆ ನಮ್ಮ ಗೋವಿಗೆ ವಿಶಾಲವಾದ ಸಂರಕ್ಷಿತ ಆಶ್ರಯತಾಣವನ್ನು ಒದಗಿಸುತ್ತದೆ. ಗೋವುಗಳು ಮುಕ್ತವಾಗಿ ತಿರುಗಾಡಲು ಮತ್ತು ಮೇಯಲು ಸಾಕಷ್ಟು ಸ್ಥಳಾವಕಾಶವಿದ್ದು ನಮ್ಮ ಪ್ರೀತಿಯ ಜಾನುವಾರುಗಳು ತಮಗಿಷ್ಟವಾದ ಸ್ವಾತಂತ್ರ್ಯ ಮತ್ತು ಶಾಂತಿಯನ್ನು ಆನಂದಿಸಬಹುದು. ಹಚ್ಚ ಹಸಿರಿನ ಹುಲ್ಲುಗಾವಲುಗಳಿಂದ ಹಿಡಿದು ನೆರಳಿನ ವಿಶ್ರಾಂತಿ ಪ್ರದೇಶಗಳವರೆಗೆ ನಮ್ಮ ವಿಶಾಲವಾದ ಗೋಶಾಲೆಯ ಪ್ರತಿಯೊಂದು ಮೂಲೆಯನ್ನೂ ಪ್ರೀತಿಯ ಹಸುಗಳಿಗೆ ಸೌಕರ್ಯ ಒದಗಿಸಲು ಅನುವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಈ ಸೌಮ್ಯ ಪ್ರಾಣಿಗಳಿಗಾಗಿ ಸಹಾನುಭೂತಿ ಮತ್ತು ಬದ್ಧತೆಯ ಪೋಷಣೆಯನ್ನು ಒದಗಿಸವ ನಮ್ಮ ಕಾರ್ಯದಲ್ಲಿ ನೀವೂ ಸೇರಿಕೊಳ್ಳಿ.

ಹೊಸ ಗೋಶಾಲೆಯ ವೈಶಿಷ್ಟ್ಯಗಳು ಮತ್ತು ಸೌಲಭ್ಯಗಳು :

ವಿಶಾಲವಾದ ಆಶ್ರಯ ತಾಣಗಳು

ಹಸುಗಳಿಗೆ ಸೂಕ್ತವಾದ ರಕ್ಷಣೆ ಮತ್ತು ಸೌಕರ್ಯವನ್ನು ಒದಗಿಸಲು ಯೋಗ್ಯವಾದ ಗಾಳಿ ಮತ್ತು ಬೆಳಕು ಹೊಂದಿದ ವಿಶಾಲವಾದ ಆಶ್ರಯ ತಾಣವನ್ನು ನಾವು ನಿರ್ಮಿಸಿದ್ದೇವೆ.

ಹುಲ್ಲುಗಾವಲು

ನಮ್ಮ ಗೋಶಾಲೆಯು ವಿಶಾಲವಾದ ಹುಲ್ಲುಗಾವಲುಗಳನ್ನು ಹೊಂದಿದೆ. ಅಲ್ಲಿ ನಮ್ಮ ಹಸುಗಳು ಮುಕ್ತವಾಗಿ ತಿರುಗಾಡಬಹುದು ಮತ್ತು ಸೊಂಪಾದ, ಪೌಷ್ಟಿಕ ಹುಲ್ಲನ್ನು ಮೇಯಬಹುದು. ಇದು ಹಸುವಿನ ನೈಸರ್ಗಿಕ ನಡವಳಿಕೆಯನ್ನು ಮತ್ತು ಒಟ್ಟಾರೆ ಆರೋಗ್ಯವನ್ನು ಉತ್ತೇಜಿಸುತ್ತದೆ.

ಪಶುವೈದ್ಯಕೀಯ ಆರೈಕೆ

ಗೋಶಾಲೆಯ ಆವರಣದೊಳಗೆ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ ಪಶುವೈದ್ಯಕೀಯ ಚಿಕಿತ್ಸಾಲಯವಿದೆ. ನಮ್ಮ ಹಸುಗಳಿಗೆ ತ್ವರಿತ ವೈದ್ಯಕೀಯ ಆರೈಕೆ ನೀಡಲು ಮತ್ತು ಹಸುಗಳ ಮೇಲೆ ಸದಾ ನಿಗಾ ಇರಿಸಲು ಅನುಭವಿ ಪಶುವೈದ್ಯರು ಹಾಗೂ ಇತರ ವೈದ್ಯಕೀಯ ಸಿಬ್ಬಂದಿಯನ್ನು ಚಿಕಿತ್ಸಾಲಯವು ಹೊಂದಿದೆ.

ಆಹಾರ ಕೇಂದ್ರಗಳು

ಗೋಶಾಲೆಯು ಸುಸಜ್ಜಿತ ಆಹಾರ ಕೇಂದ್ರವನ್ನು ಹೊಂದಿದೆ. ಹಸುಗಳು ತಮ್ಮ ಪೌಷ್ಟಿಕಾಂಶದ ಅಗತ್ಯಗಳಿಗೆ ಅನುಗುಣವಾಗಿ ಸಮತೋಲಿತ ಆಹಾರವನ್ನು ಪಡೆಯಲು ಉತ್ತಮ ಗುಣಮಟ್ಟದ ಆಹಾರ ಮತ್ತು ಪೂರಕಾಂಶಗಳನ್ನು ಒದಗಿಸಲಾಗುತ್ತದೆ.

ನೀರು ಸರಬರಾಜು

ನಮ್ಮ ಹಸುಗಳ ಆರೋಗ್ಯ ಹಾಗೂ ಯೋಗಕ್ಷೇಮಕ್ಕೆ ಸಾಕಷ್ಟು ನೀರಿನ ಪೂರೈಕೆ ಅಗತ್ಯ. ಎಲ್ಲ ಸಮಯದಲ್ಲೂ ನಮ್ಮ ಹಸುಗಳ ನೀರಿನ ಅಗತ್ಯತೆಯನ್ನು ಪೂರೈಸಲು ಮತ್ತು ವಿಶ್ವಾಸಾರ್ಹ ನೀರಿನ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ನೀರಿನ ತೊಟ್ಟಿಗಳನ್ನು ನಾವು ಸ್ಥಾಪಿಸಿದ್ದೇವೆ

ತ್ಯಾಜ್ಯ ನಿರ್ವಹಣೆ

ನಾವು ಗೋಶಾಲೆಯ ಆವರಣದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಪರಿಣಾಮಕಾರಿ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಜಾರಿಗೆ ತಂದಿದ್ದೇವೆ, ಆ ಮೂಲಕ ನಮ್ಮ ಹಸುಗಳಿಗೆ ಆರೋಗ್ಯಕರ ವಾತಾವರಣವನ್ನು ಖಾತ್ರಿಪಡಿಸಿಕೊಳ್ಳುತ್ತೇವೆ.
ಹೊಸ ಗೋಶಾಲೆಯ ನಿರ್ಮಾಣವನ್ನು ವೇಗವಾಗಿ ಕೈಗೊಳ್ಳುತ್ತಿರುವ ನಾವು ನಮ್ಮ ಗೋವುಗಳಿಗೆ ಕಾಳಜಿ ಒದಗಿಸಲು ಮತ್ತು ಉನ್ನತ ಗುಣಮಟ್ಟದ ಆಶ್ರಯವನ್ನು ಖಾತ್ರಿಪಡಿಸಲು ನಾವು ಬದ್ಧರಾಗಿದ್ದೇವೆ. ಅವರ ಹೊಸ ಮನೆಗೆ ಅವರನ್ನು ಸ್ವಾಗತಿಸಲು ಮತ್ತು ಅವರಿಗೆ ಅರ್ಹವಾದ ಪ್ರೀತಿ ಮತ್ತು ಗೌರವವನ್ನು ಒದಗಿಸಲು ನಾವು ಎದುರು ನೋಡುತ್ತಿದ್ದೇವೆ.

ಪವಿತ್ರ ಗೋವುಗಳನ್ನು ಸಂರಕ್ಷಿಸಲು ನಮ್ಮೊಂದಿಗೆ ಜೊತೆಯಾಗಿ

ಬೃಂದಾವನ ಗೋಶಾಲೆಯಲ್ಲಿ ಪವಿತ್ರ ಗೋವುಗಳ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ನಮ್ಮೊಂದಿಗೆ ಸೇರಿ. ನಿಮ್ಮ ಕೊಡುಗೆ ನಮ್ಮ ಸಹಾನುಭೂತಿಯ ಸಂಪ್ರದಾಯವನ್ನು ಕಾಪಾಡುತ್ತದೆ.